ಅಗ್ನಿಸಾಕ್ಷಿಯಲ್ಲಿ ಲವರ್ ಬಾಯ್ ಆಗಿದ್ದ ಸಿದ್ಧಾರ್ಥ್ ಈಗ ಆಕ್ಷನ್ ಹೀರೋ | Oneindia Kannada

2017-11-10 1,020

'ಅಗ್ನಿಸಾಕ್ಷಿ'ಯಲ್ಲಿ ಹೆಬ್ಬುಲಿ : ಲವರ್ ಬಾಯ್ ಸಿದ್ಧಾರ್ಥ್ ಈಗ ಆಕ್ಷನ್ ಹೀರೋ ! ಧಾರಾವಾಹಿ ಅಂತ ಹೇಳಿದ ತಕ್ಷಣ ಬರೀ ಅಳು... ಬರೀ ಗೋಳು... ಎನ್ನುವ ಭಾವನೆ ಎಲ್ಲರಲ್ಲಿಯೂ ಬಂದು ಬಿಡುತ್ತದೆ. ಆದರೆ ಈಗೀಗ ಧಾರಾವಾಹಿಗಳು ಸಹ ಬದಲಾಗುತ್ತಿದೆ. ಸೀರಿಯಲ್ ಗಳು ಕೂಡ ಕಮರ್ಶಿಯಲ್ ರೂಪವನ್ನು ಪಡೆದುಕೊಳ್ಳುತ್ತಿವೆ. ಸದ್ಯ 'ಅಗ್ನಿಸಾಕ್ಷಿ' ಸೀರಿಯಲ್ ನಲ್ಲಿ ಮೊದಲ ಬಾರಿಗೆ ಒಂದು ಬದಲಾವಣೆ ಆಗಿದೆ. ಈ ಧಾರಾವಾಹಿಯಲ್ಲಿ ಫಸ್ಟ್ ಟೈಂ ಆಕ್ಷನ್ ಸನ್ನಿವೇಶ ಬಂದು ಬಿಟ್ಟಿದೆ. ಇಷ್ಟು ದಿನ ಲವರ್ ಬಾಯ್ ಮತ್ತು ಚಾಕಲೇಟ್ ಹೀರೋ ಆಗಿದ್ದ ಸಿದ್ಧಾರ್ಥ್ ಈಗ ಆಕ್ಷನ್ ಸ್ಟಾರ್ ಆಗಿದ್ದಾರೆ.'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸಾಹಸ ದೃಶ್ಯ ಬಂದಿದೆ. ನಟ ಸಿದ್ಧಾರ್ಥ್ ಇಲ್ಲಿ 'ಹೆಬ್ಬುಲಿ' ಚಿತ್ರದ ಮ್ಯೂಸಿಕ್ ನೊಂದಿಗೆ ಸಖತ್ ಆಗಿ ಆಕ್ಷನ್ ಮಾಡಿದ್ದಾರೆ.